ಸಹಾಯಕ್ಕೆ ಕರೆದರೂ ಕೊರೋನಾ ಭಯದಿಂದ ಹತ್ತಿರ ಸುಳಿಯದ ಜನ: ಹೆತ್ತಮ್ಮನ ಕಣ್ಣೆದುರೇ ಮಗ ಸಾವು

3
0

ಮಡಿಕೇರಿ: ಮಂಗಳೂರಿನಿಂದ ಮನೆಗೆ ಬಂದು ಹತ್ತು ದಿನಗಳ ನಂತರ ಮನೆಯಲ್ಲಿಯೇ ಸಂಶಯಾಸ್ಪದವಾಗಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಸೋಮವಾರ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಜಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಿ.ಸೋಮಯ್ಯ ಎಂಬವರ ಪುತ್ರ ರೋಷನ್‌ ಸತ್ಯಸಾಯಿ(41) ಮೃತರು. ಮಂಗಳೂರಿನಲ್ಲಿ ನೌಕರಿಯಲ್ಲಿದ್ದ ರೋಷನ್‌ ಮಾ.20ರಂದು ಮನೆಗೆ ಬಂದಿದ್ದರು. ನಂತರ ಅನಾರೋಗ್ಯದಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಸೋಮವಾರ ಸಂಜೆ ಬಾತ್‌ರೂಂನಲ್ಲಿ ಬಿದ್ದು ಮೃತಪಟ್ಟಿದ್ದರು.

ಕೊರೋನಾ ಸೋಂಕಿನ ಶಂಕೆ ವ್ಯಕ್ತಪಡಿಸಿ, ಆರೋಗ್ಯ ಇಲಾಖೆಗೆ ಮಾಹಿತಿ ತಲುಪಿದ ನಂತರ, ಎಲ್ಲಾ ತರಹದ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು, ಶವವನ್ನು ಆಸ್ಪತ್ರೆಯ ಶವಗಾರ ತರಲಾಗಿತ್ತು. ಮಂಗಳವಾರ ಮಡಿಕೇರಿ ಮೆಡಿಕಲ್‌ ಕಾಲೇಜಿನ ತಜ್ಞವೈದ್ಯ ಯೋಗೇಶ್‌ ಅವರಿಂದ ಶವಪರೀಕ್ಷೆ ನಡೆಸಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಶವವನ್ನು ಆ್ಯಂಬುಲೆನ್ಸ್‌ನಲ್ಲಿ ಗ್ರಾಮಕ್ಕೆ ಸಾಗಿಸಿ ಸಿಬ್ಬಂದಿಯೇ ಸುಟ್ಟಿದ್ದಾರೆ. ಡಿಎಚ್‌ಒ ಅವರ ನಿರ್ದೇಶನದಂತೆ ಕೋವಿಡ್‌-19 ಪರೀಕ್ಷೆಗೆ ಅವಶ್ಯವಿರುವ ದೇಹದೊಳಗಿನ ಎಲ್ಲಾ ಅಂಗಾಂಶಗಳನ್ನು ತೆಗೆದು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಸಂಪೂರ್ಣ ವರದಿ ಬಂದ ನಂತರ, ಸಾವಿಗೆ ಕಾರಣ ತಿಳಿಯಲಿದೆ ಎಂದು ಡಾ.ಯೋಗೇಶ್‌ ಸುದ್ದಿಗಾರರಿಗೆ ತಿಳಿಸಿದರು.

LEAVE A REPLY

Please enter your comment!
Please enter your name here