ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯ ಬೇಕಾಬಿಟ್ಟಿ ತಿರುಗಾಟ : ಬಿಸಿಲಲ್ಲಿ ನಿಲ್ಲುವ ಶಿಕ್ಷೆ

4
0

ಬಾದಾಮಿ: ಕೋಲ್ಕತಾದಿಂದ ಆಗಮಿಸಿದ್ದ ಸ್ಥಳೀಯ ಯುವಕನೊಬ್ಬನಿಗೆ ಹೋಂ ಕ್ವಾರಂಟೈನ್‌ (ಗೃಹಬಂಧನ)ದಲ್ಲಿರಲು ಸೂಚಿಸಿದ್ದರೂ ಬೇಕಾಬಿಟ್ಟಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಿದ ಹಿನ್ನೆಲೆಯಲ್ಲಿ ಆತನನ್ನು ಅರೆಬೆತ್ತಲೆಯಾಗಿ ಅರ್ಧಗಂಟೆ ಕಾಲ ರಣಬಿಸಿನಲ್ಲಿಯೇ ನಿಲ್ಲಿಸಿದ ಪ್ರಸಂಗ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಗುರುವಾರ ನಡೆದಿದೆ.

ಮಾ.22 ರಂದು ನಗರಕ್ಕೆ ಆಗಮಿಸಿದ್ದ ಈ ಯುವಕ ಕಳೆದ ನಾಲ್ಕು ದಿನಗಳಿಂದ ಮನೆಯಲ್ಲಿರದೇ ಸ್ನೇಹಿತರ ಜೊತೆಗೂಡಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಪೊಲೀಸರು ಠಾಣೆಯ ಮುಂಭಾಗದಲ್ಲಿ ಅರ್ಧಗಂಟೆ ಕಾಲ ನಿಲ್ಲಿಸಿ ಶಿಕ್ಷೆ ವಿಧಿಸಿದರು. ಇನ್ನೂ 10 ದಿನಗಳ ಕಾಲ ಕಡ್ಡಾಯವಾಗಿ ಮನೆಯಲ್ಲಿರಬೇಕು ಎಂದು ತಾಲೂಕಾಡಳಿತದ ಅಧಿಕಾರಿಗಳು ಯುವಕನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

LEAVE A REPLY

Please enter your comment!
Please enter your name here